Tuesday 27 September 2016

ಬಂಡೀಪುರದಲ್ಲಿ `ಪ್ರಿನ್ಸ್’ ಎಂಬ ವಿಸ್ಮಯ

ಕಾಡು ಹಲವು ವಿಸ್ಮಯಗಳ ಬೀಡು, ಹಲವು ಮೃಗಾಲಯಗಳಲ್ಲಿ  ಪ್ರಾಣಿಗಳನ್ನು ಕಂಡಿದ್ದ ನನಗೆ  ಅವುಗಳ ಮನೆಯಲ್ಲಿ ಅವನ್ನು ಭೇಟಿಯ ಹಂಬಲ ಮೊಳಕೆಯೊಡೆದಿತ್ತು ಇದರೊಂದಿಗೆ ಛಾಯಾಗ್ರಣದ ಹುಚ್ಚು ಸೇರಿಕೊಂಡು ಹಲವಾರು ಬಾರಿ ಹಲವು ಕಾಡುಗಳಿಗೆ ಭೇಟಿ ನೀಡಿದ್ದಾಗಿತ್ತು

ಮೊದಲು ಹಲವು ಕಾಡುಗಳಿಗೆ ಭೇಟಿ ನೀಡಿ ಹಲವು ಪ್ರಾಣಿಗಳನ್ನು ಭೇಟಿಯಾಗಿದ್ದಾಯಿತು. ಆದರೂ ಹಲವು ಭೇಟಿಯಾಗುವ ಕರುಣೆ ತೋರಿರಲಿಲ್ಲ. ಮತ್ತೆ ಕಾಡಿಗೆ ಹೋಗಲು ಆಸಕ್ತಿ ಇದ್ದ ನನಗೆ ಫೆಸ್ಬುಕ್ನಲ್ಲಿ ಬಂಡೀಪುರದಲ್ಲಿ ಆಗಸ್ಟ್ 27-28ರಂದುಜಂಗಲ್ ಡೈರಿಸಂಸ್ಥೆ ಆಯೋಜಿಸಿರುವ ವೈಲ್ಡ್ ಲೈಫ್ ಫೋಟೊಗ್ರಾಫಿ ಫ್ಯಾಕೇಜ್ ಟೂರ್ ಇಷ್ಟವಾಗಿ ಅದರ ಸಾರಥಿ ಗಗನ್ ಅವರೊಂದಿಗೆ ಚರ್ಚಿಸಿ ನನ್ನ ಸ್ಥಾನ ಕಾದಿರಿಸಿದೆ
ಇದಲ್ಲದೆ ಒಬ್ಬನೇ ಹೋಗುವ ಬೇಸರ ಕಳೆಯಲು ನನ್ನ ಊರಿನ ಸ್ನೇಹಿತರಾದ ಸುಬ್ರಹ್ಮಣ್ಯ ,ಲೋಕೇಶ್ ಅವರನ್ನು ಹೋರಡಿಸಲು ಒಪ್ಪಿಸಿದ್ದಾಯಿತು. ಹೊರಡಲು ಒಂದು ವಾರವಿರುವಾಗ ಸಂಸ್ಥೆಯವರುಬಂಡೀಪುರ ಅಡ್ವೇಂಚರ್ಸ್ಎಂಬ ವಾಟ್ಸ್ ಆಪ್ ಗ್ರೂಪ್ರಚಿಸಿ ನಿತ್ಯ ಸಫಾರಿಗಳಲ್ಲಿ ಸಿಗುತ್ತಿರುವ ಪ್ರಾಣಿಗಳನ್ನು ತಿಳಿಸುತ್ತಿದ್ದರು. ಬಂಡೀಪುರದ ಕುರಿತು ಮಹತ್ವದ ಮಾಹಿತಿ ನೀಡುತ್ತಿದ್ದರು
ನಮಗೆ ಬಂಡೀಪುರದಲ್ಲಿರುವ ಅರಣ್ಯ ಇಲಾಖೆ ಡಾರ್ಮೆಟರಿಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಇದೆಲ್ಲದ್ದಕ್ಕಿಂತ ಮುಖ್ಯವಾಗಿ ಹುಲಿ, ಚಿರತೆ ಸತತವಾಗಿ ದರ್ಶನ ನೀಡುತ್ತಿರುವ ಮಾಹಿತಿ ದೊರೆಯುತ್ತಿತ್ತು

ಸರಿ ಹೊರಡುವ ದಿನ ನಮ್ಮ ಊರು ಹೆಬ್ಬೂರಿನಿಂದ ಮೈಸೂರಿಗೆ ಹೋಗಿ ಗುಂಡ್ಲುಪೇಟೆ ಮಾರ್ಗವಾಗಿ ಬಂಡೀಪುರ ತಲುಪುವ ಯೋಜನೆ ರೂಪಿಸಲಾಗಿತ್ತು. ನಾವು ನಮ್ಮ ಊರಿನಿಂದ ಬೆಳ್ಳಗ್ಗೆ 8ಗಂಟೆಗೆ ಹೊರಟು ನಿಂತೆವು
ಬಸ್ಮಂಡ್ಯ ತಲುಪುವ ವೇಳೆಗೆ ಗಂಟೆ ಮಧ್ಯಾಹ್ನ 11 ಆಗಿತ್ತು. ನಮಗೆ ಡಾರ್ಮೆಟರಿಗಳಲ್ಲಿ 12ಗಂಟೆಗೆ ಚೆಕ್ಇನ್‌  ಆಗಲು ಸೂಚಿಸಲಾಗಿತ್ತು. ಆದರೆ ನಮ್ಮ ಅದೃಷ್ಟಕ್ಕೆ ಮಂಡ್ಯದಾಟುವ ವೇಳೆಗೆ ಗಗನ್ ಅವರು ಕರೆ ಮಾಡಿ ಶ್ರೀರಂಗಪಟ್ಟಣದಲ್ಲಿ ಇಳಿಯಲು ತಿಳಿಸಿ ತಮ್ಮ ಕಾರಿನಲ್ಲಿ ಬರಲು ತಿಳಿಸಿದರು
ಸರಿ ಶ್ರೀರಂಗಪಟ್ಟಣದಿಂದ ಅವರೊಡನೆ ಹೊರಟನಾವು ಬಂಡೀಪುರ ತಲುಪುವ ವೇಳೆಗೆ ಸಮಯ ಮಧ್ಯಾಹ್ನ 1.30 ದಾಟಿತ್ತು. ನಾವು ಬರುವ ವೇಳೆಗಾಗಲೆ 16ಜನರ ತಂಡ ಡಾರ್ಮೆಟರಿಯಲ್ಲಿ ಠಿಕ್ಕಾಣಿ ಹೂಡಿತ್ತು. ನಾವು ಅಲ್ಲಿ ತಲುಪಿ ಫ್ರೆಶ್ಆಫ್ ಆಗಿ ಊಟಕ್ಕೆ ಕ್ಯಾಂಟೀನ್ ತಲುಪಿದೆವು. ಕ್ಯಾಂಟೀನ್ ಊಟ ಇಷ್ಟವಾಯಿತು. ಊಟದ ನಂತರ ಕ್ಯಾಂಟೀನ್ ಮುಂಭಾಗದಲ್ಲಿ ಪರಿಚಯ ಮಾಡಿಕೊಂಡೆವು.
ಗಗನ್ ಬಂಡೀಪುರ ಕಾಡಿನ ಕುರಿತು ಮಾಹಿತಿ ನೀಡಿದರು ಮತ್ತು ಸಫಾರಿ ಸಮಯದಲ್ಲಿ ಹೇಗೆ ವರ್ತಿಸಬೇಕು ಎಂದು ತಿಳಿಸಿದರು
ಇದೇ ಸಮಯವೆಂಬಂತೆ ನನ್ನ ಕ್ಯಾಮೆರಾ ಮಹಾಶಯ ಉಪದ್ರ ನೀಡಲು ಶುರು ಮಾಡಿದ್ದ. ಸಫಾರಿ ಹೋಗಲು ಉಳಿದಿದ್ದ 15-20 ನಿಮಿಷಗಳಲ್ಲಿ ತಾಳ್ಮೆ ಇರಲಿ ಅಂತ ಅದಕ್ಕೆ ಬುದ್ಧಿ ಹೇಳಿದೆ. ನಮ್ಮ 18 ಜನರ ಸಫಾರಿಗೆ ಸಾಕಾಗುವಂತಹ ಎಸ್.ಎಮ್.ಎಲ್ ವಾಹನ ಸಂಜೆ ಎರಡು ಸಫಾರಿಗಳಿಗೆ ಬುಕ್ ಮಾಡಲಾಗಿತ್ತು
ನಾನು ವಾಹನವನ್ನು ಬೇಗ ಹತ್ತಿ ಪೋಟೋ ತೆಗೆಯಲು ಸಹಕಾರಿಯಾಗಿರುವ ಕಿಟಕಿ ಪಕ್ಕದ ಆಸನವನ್ನು ಹಿಡಿದೆ. ನಮ್ಮ ವಾಹನವನ್ನು ಸುಮಾರು 20 ವರ್ಷ ಬಂಡೀಪುರದಲ್ಲಿ ವಾಹನ ಚಾಲಕರಾಗಿರುವ ಮೋಯಿನ್ಅವರು ಚಲಾಯಿಸುತ್ತಿದ್ದರು. ನಮ್ಮ ವಾಹನ ಮೊದಲು ಎಲ್ಲ ವಾಹನಗಳು ಚಲಿಸಿದ ಮಾರ್ಗ ಬಿಟ್ಟು ಚಿಕ್ಕಸುರಳಿಕಟ್ಟೆ ಮಾರ್ಗದಲ್ಲಿ ಅರಣ್ಯ ಪ್ರವೇಶಿಸಿದ ತಕ್ಷಣ ಆಹಾರ ಅರಸುತ್ತಿದ್ದ ಮುಂಗುಸಿ ಸ್ವಾಗತ ಕೋರಿತು
ಕೆಲವರು ಅದರ ಪೋಟೋ ಕ್ಲಿಕಿಸಿದರು. ಇನ್ನು ಸ್ವಲ್ಪ ದೂರ ಹೋಗುವ ವೇಳೆಗೆ ಒಂದು ಬೋಳು ಮರದ ಮೇಲೆ ಕುಳಿತಿದ್ದ ಹಸಿರು ಬಾಲದ ಜೇನು ಹಿಡುಕ ದರುಶನ ಭಾಗ್ಯ
ಹಸಿರು ಬಾಲದ ಜೇನು ಹಿಡುಕ
ನಮಗಾಗಿತ್ತು. ಅಲ್ಲಿಂದ ನಾವು ಎರೆಕಟ್ಟೆ, ಕೊಳತಮಲ್ಲಿ ಕಟ್ಟೆ ಕಡೆಯಿಂದ ಅರಣ್ಯ ಪ್ರವೇಶಿಸುವ ವೇಳೆಗೆ ಮಳೆ ಧೋ ಏಂದು ಸುರಿಯಿತು, ಮಳೆಗೆ ಕಾಡೆಮ್ಮೆ ಹೊರತುಪಡಿಸಿ ಮತ್ತಾವ ಪ್ರಾಣಿಯು ಸಿಗಲಿಲ್ಲ
ಎರಡನೇ ಬಾರಿ ಸಫಾರಿಗೆ ನಮ್ಮ ವಾಹನ ಅರಣ್ಯ ಇಲಾಖೆ ಕಚೇರಿ ಬಳಿಯಿಂದ ಹೊರಟಿತು
ವೇಳೆಗೆ ಶುಭ ಸೂಚನೆ ಎಂಬಂತೆ ಸುರಿಯುತ್ತಿದ್ದ ಮಳೆಯು ನಿಂತಿತ್ತು, ಸಫಾರಿ ಹೊರಟ ಸ್ವಲ್ಪ ಹೊತ್ತಿಗೆ ನಮ್ಮ ಚಾಲಕ ಮತ್ತು ಗಗನ್ ಅವರಿಗೆ ಹುಲಿರಾಯ ಕರೆಗೌಡನಕಟ್ಟೆ
ಪ್ರದೇಶದಲ್ಲಿ ಇರುವ ಕುರಿತು ಮಾಹಿತಿ ಸಿಕ್ಕಿತ್ತು. ನಮ್ಮ ವಾಹನ ಚಲಾಯಿಸುತ್ತಿದ್ದ ಮೋಯಿನ್ಕಾಡಿನ ದಾರಿ ಬಗ್ಗೆ ಸಂಪೂರ್ಣ ತಿಳಿವಳಿಕೆ ಹೊಂದಿದ್ದರು.

ಅರಣ್ಯದಲ್ಲಿ ಮಳೆಯಿಂದ ಜಾರುವ ರಸ್ತೆಯಲ್ಲಿ ವೇಗವಾಗಿ ಜಾಗ ತಲುಪಿದರು. ನಾವು ಅಲ್ಲಿ ಬರುವ ಬಗ್ಗೆ ಸುಳಿವರಿತ ಹುಲಿರಾಯ ನಮ್ಮ ವಾಹನ ಬರುವ ಸಮಯಕ್ಕೆ ಸರಿಯಾಗಿ ರಸ್ತೆಯ ಬದಿಯಿಂದ ಬದಿಗೆ ಛಂಗನೆ ನೆಗೆದು ಪರಾರಿಯಾದ.  ಚಾಲಕರ ಸಮೀಪದ ಆಸನದಲ್ಲಿ ಕುಳಿತ ಮಲ್ಲಿಕಾರ್ಜುನ್ ಹೊರತುಪಡಿಸಿ ಮತ್ತಾರಿಗೂ ಅದರ ದರ್ಶನ ಸಿಗಲಿಲ್ಲ. ತುಂಬ ಸಮಯ ನಮ್ಮ ತಂಡ ಕರೇಗೌಡನಕಟ್ಟೆ ಬಳಿಯಲ್ಲೆ ಹುಲಿಯ ನಿರೀಕ್ಷೆಯಲ್ಲೆ ಕಳೆಯಿತು.
ಸುಮಾರು 30–40 ನಿಮಿಷಗಳ ನಿರೀಕ್ಷೆ ನಂತರ ನಮ್ಮ ಚಾಲಕ ಅದುಮಿನಿಷ್ಟರ್ಗುತ್ತಿಪ್ರದೇಶದ ಕಡೆ ಹೋಗಿರಬಹುದೆಂದು ಅಂದಾಜಿಸಿ ನಮ್ಮ ವಾಹನವನ್ನು ಕಡೆಗೆ ಚಲಾಯಿಸಿದರು. ಅಲ್ಲಿ ವೇಳೆಗಾಗಲೆ ಸುಮಾರು 10–15 ವಾಹನಗಳು ಅಲ್ಲಿ ಠಿಕ್ಕಾಣಿ ಹೂಡಿದ್ದವು. ನಾವು ಅಲ್ಲಿಯ ಕೆರೆಯ ಎರಿಯ ಸಮೀಪದಲ್ಲಿ 20 ನಿಮಿಷ ಕಳೆದರೂ ಹುಲಿರಾಯ ಪ್ರತ್ಯಕ್ಷವಾಗಲಿಲ್ಲ
ಇದು ಹುಸಿ ಮಾಹಿತಿ ಎಂದು ಬಾವಿಸಿದ ನಾವು ನಮ್ಮ ವಾಹನವನ್ನು ಕೆರೆಯ ಎರಿಯ ಭಾಗದಿಂದ ತಿರುಗಿಸಿ ಸ್ವಲ್ಪ ಮುಂದೆ ಚಲಿಸುವ ವೇಳೆಗೆ ಹುಲಿ ನಾವು ಹಿಂದೆ ನಿಂತಿದ್ದ ಕೆರೆ ಎರಿಯ ಬಳಿಯೆ ಪ್ರತ್ಯಕ್ಷವಾಗಿದ್ದ.

ತಕ್ಷಣ ನಮ್ಮ ವಾಹನ ಚಾಲಕರು ಮುಂದೆ ಚಲಿಸುತ್ತಿದ್ದ ನಮ್ಮ ವಾಹನ ಕಾಡು ದಾರಿಯಲ್ಲಿ ವಾಹನಗಳ ದಟ್ಟಣೆಯ ನಡುವೆಯೂ ಹಿಮ್ಮುಖವಾಗಿ ಚಲಾಯಿಸಿ ಹುಲಿ ಚಲಿಸುತ್ತಿರುವ ಜಾಗಕ್ಕೆ ತಂದು ಬಿಟ್ಟರು.
ಮೊದಲ ಬಾರಿ ಕಾಡಿನ ಹುಲಿ ಕಂಡ ನಮಗೆ ಆದ ಆನಂದ ಹೇಳತೀರದಾಗಿತ್ತು. ನಾನು ಆವರೆಗೂ ಕೂತ್ತಿದ್ದ ಕಿಟಕಿ ಬಳಿ ಆಸನ ಬಿಟ್ಟು ವಾಹನದ ಎಂಜಿನ್ ಬಾಕ್ಸ್ ಮೇಲೆ ಕುಳಿತಿದ್ದೆ, ನನ್ನ ಮೇಲೆ ಅತೀವ ಪ್ರೀತಿ ತೋರಿದ ಹುಲಿರಾಯ ಸುಮಾರು

ಒಂದು ಕಿಲೋ.ಮೀಟರ್ಗಳಷ್ಟು ದೂರ ನನಗೆ ಕ್ಯಾಮೆರಾ ಅಭ್ಯಾಸ ನಡೆಸಲು ಸಹಕರಿಸಿದ. ನಡೆದ ಅಷ್ಟೂ ದೂರ ಅಲಲ್ಲಿ ಲಂಟಾನದ ಪೊದೆಗಳ ನಡುವೆ ಮಾಯವಾಗಿ ಮತ್ತೆ ನಮ್ಮ ವಾಹನದ ಬಳಿ ಕಾಣಿಸಿಕೊಳ್ಳುವ ಔದಾರ್ಯ ತೋರಿ ನಂತರ ಲಂಟಾನದ ಪೊದೆಗಳಲ್ಲಿ ಮರೆಯಾದ.

ನಡುವೆ ನಮ್ಮ ಚಾಲಕ ನನಗೆ ಹುಲಿಯ ಹೆಸರುಪ್ರಿನ್ಸ್ಎಂದು ಅದು ಬಹಳ ಹಸಿದಿರುವುದಾಗಿಯೂ ತಿಳಿಸಿದರು.
ನಾನು ಹುಲಿ ಇಂಥ ಜಾಗದಲ್ಲೆ ಇತ್ತು ಎಂದು ಹೇಗೆ ತಿಳಿಯಿತು ಎಂದಾಗ ಅವರು ಹುಲಿಬರುವ ಸಮಯಲ್ಲಿ ಎಚ್ಚರಿಸಿದ ಲಂಗೂರ್ಕೋತಿಗಳು, ಜಿಂಕೆಗಳು ಕೂಗಿದ ಶಬ್ಧ ಹಾಗೂ ನೀರಿನಿಂದ ಹಾರಿದ ಹಕ್ಕಿಗಳ ಕುರಿತು ಹೇಳಿದರು. ಇದಲ್ಲದೆ ಹೆಜ್ಜೆ ಗುರುತು, ಮಲ , ಮರ ಪರಚಿರುವುದರ ಮೂಲಕ ತಿಳಿಯಬಹುದು ಎಂದರು.


ಹುಲಿ ಕಂಡ ಗುಂಗಿನಲ್ಲಿ ನಾವು ಅರಣ್ಯ ಇಲಾಖೆ ಡಾರ್ಮೆಟರಿ ತಲುಪುವ ವೇಳೆಗೆ ಸೂರ್ಯ ಮಲಗಿ ಚಂದ್ರ ಎಚ್ಚರಗೊಂಡಿದ್ದ ರಾತ್ರಿ 7.30 ಸುಮಾರಿಗೆ ಡಾರ್ಮೆಟರಿಯಿಂದ ಹೊರ ಬಂದು ಕ್ಯಾಂಟೀನ್ ಕಡೆಗೆ ಹೊರಟ ನಮಗೆ ಕಾಡಿನ ಕತ್ತಲಿನಲ್ಲಿ ಸಮಾರಷ್ಟು ಹೊಳೆಯುವ ಕಣ್ಣುಗಳು ಗೋಚರಿಸಿದವು. ಅವೇನೆಂದು ಮೊಬೈಲ್ಕ್ಯಾಮೆರಾ ಆನ್ ಮಾಡಿದ ನಮಗೆ ಅಲ್ಲಿರುವ ಸುಮಾರು 250–300 ಜಿಂಕೆಗಳನ್ನು ಕಂಡು ಆನಂದ, ಆಶ್ಚರ್ಯ ಮತ್ತು ಭಯ ಒಮ್ಮೆಗೆ ಉಂಟಾದವು.

ನಾವು ಕ್ಯಾಂಟೀನ್ ತಲುಪುವ ವೇಳೆಗೆ ಗಗನ್ಇನ್ನೂ ಕೆಲವು ಸಫಾರಿ ವಾಹನ ಚಾಲಕರ ಜತೆ ಚರ್ಚಿಸುತ್ತಿದ್ದರು. ಚರ್ಚೆ ಮುಗಿಸಿ ಬಂದ ಗಗನ್ಮತ್ತೊಂದು ಸಫಾರಿ ವಾಹನಕ್ಕೆ ಕರೆಗೌಡನ ಕಟ್ಟೆ ಬಳಿ ಹುಲಿ ಕಾಡೆಮ್ಮೆ ಮೇಲೆ ವಿಫಲ ದಾಳಿ ಮಾಡಿದ ಕುರಿತು ತಿಳಿಸಿದ ವಿಷಯ ರೋಮಾಂಚನ ಉಂಟು ಮಾಡಿತು. ಹುಲಿ ಕುರಿತು ಯೊಚಿಸುತ್ತಿದ್ದ ನನಗೆ ನಿದ್ದೆ ಹತ್ತಿದ್ದೆ ತಿಳಿಯದಾಯಿತು.
ಎಚ್ಚರವಾದಾಗ ಬೆಳಿಗ್ಗೆ 5.30 ಆಗಿತ್ತು. ನಿತ್ಯ ಕರ್ಮಗಳನ್ನು ಮುಗಿಸಿ ಬೆಳ್ಳಗಿನ ಸಫಾರಿಗಾಗಿ ಹೊರಬಂದಾಗ ಸಮಯ ಸುಮಾರು 6 ಗಂಟೆ. ಡಾರ್ಮೆಟರಿಯಿಂದ ಹೊರ ಬಂದ ನನಗೆ ಮತ್ತು ನನ್ನ ಜೋತೆಯಲ್ಲೆ ಇದ್ದ ಆರ್ನವ್ನಿಗೆ ಜಾಂಬವಂತನ ದರ್ಶನ ಭಾಗ್ಯ ಸಿಕ್ಕಿತ್ತು. ಅದೇ ಖುಷಿಯಲ್ಲೆ ವಾಹನ ಎರಿದ ನನಗೆ ಆನಂದವೂ ಆನಂದ ನಮ್ಮ ವಾಹನ ಬಾರಿ ಡ್ಯಾಂ ರಸ್ತೆ ಮಾರ್ಗವಾಗಿ ಕಾಡಿನೊಳಗೆ ಪ್ರವೇಶಿಸಿತ್ತು

ರಸ್ತೆಯಲ್ಲಿ ನಮಗೆ ಜಿಂಕೆ ಹೊರತು ಪಡಿಸಿ ಯಾವ ಪ್ರಾಣಿ ಕಾಣಸಿಗಲಿಲ್ಲ, ನಂತರ ನಾವು ಕೊಳೆತಮಲ್ಲಿ ಕಟ್ಟೆ ಬಳಿಯ ಅರಣ್ಯ ಪ್ರವೇಶಿಸಿದವು. ಅಲ್ಲಿ ಕಾಡಿನಂಚಿನಲ್ಲೆ ಎರಡು ಆನೆಗಳು ನೋಡಲು ಸಿಕ್ಕವು. ಅವುಗಳಲ್ಲಿ ಆನೆಯೊಂದು ಮರಿಗೆ ಜನ್ಮ ನೀಡಿ ಕೆಲವೇ ಕ್ಷಣ ಕಳೆದಿತ್ತು. ನಡೆಯಲೂ ಆಗದ ಮರಿಯಾನೆ ರಕ್ಷಣೆಗೆ ನಿಂತಿದ್ದ ಎರಡೂ ಆನೆಗಳು ನಮಗೆ ಹತ್ತಿರ ಬರದಂತೆ ಬೆದರಿಸುತ್ತಿದ್ದವು.
ಸುಮಾರು ಹೊತ್ತು ಅಲ್ಲೆ ಕಳೆದ ನಾವು ಮತ್ತೆ ಅರಣ್ಯ ಇಲಾಖೆ ಕಚೇರಿ ಬಳಿ ತೆರಳಿ, ಚಳಿಗೆ ಹಿತವೆನಿಸುವ ಕಾಫಿ ಹೀರುವ ವೇಳೆಗೆ ಗಗನ್ಮತ್ತೊಂದು ಸಫಾರಿಗೆ ಟಿಕೆಟ್ ಖರೀದಿಸಿದ್ದರು. ವಾಹನ ಹತ್ತಿದ ನಾವು ಬಾರಿ ಹುಲಿಕಟ್ಟೆ, ಆನೆಕಟ್ಟೆ, ಚಿಕ್ಕಸುರಳಿಕಟ್ಟೆ ಮತ್ತು ಯರೇಕಟ್ಟೆಗೆ ಭೇಟಿ ನೀಡಿ ಒಂಟಿ ಆನೆ, ಕಾಡೆಮ್ಮೆ, ಜಿಂಕೆ, ಬಣ್ಣದ ಕೊಕ್ಕರೆ, ಮರಕುಟಿಕ, ಕಾಡು ಪಾರಿವಾಳ, ಗಿಡುಗ, ಹದ್ದು ಹಾಗೂ ನವಿಲುಗಳನ್ನು ಕಣ್ಣು, ಕ್ಯಾಮಾರಾಗಳು ಸೆರೆ ಹಿಡಿದೆವು

ಇನ್ನೇನು ಸಫಾರಿ ಮುಗಿಸಿ ಅರಣ್ಯ ಇಲಾಖೆ ಕಚೇರಿ ಬಳಿಗೆ ಬರುವ ವೇಳೆಗೆ ಅಲ್ಲೆ ಮೈಸೂರುಊಟಿ ಮುಖ್ಯ ರಸ್ತೆಯಲ್ಲೆ ರೆಕ್ಕೆ ತೆರೆದು ನರ್ತಿಸುತ್ತಿದ್ದ ನವಿಲು ವಿದಾಯ ಹೇಳಿದಂತೆ ಭಾಸವಾಯಿತು. ಇವೆಲ್ಲವನ್ನು ಕಂಡ ನಾವು ಒಲ್ಲದ ಮನಸ್ಸಿನಿಂದಲೇ ಬಂಡೀಪುರಕ್ಕೆ ವಿದಾಯ ಹೇಳಿದೆವು.
ಹುಲಿ ಕಂಡ ನಮ್ಮ ತಂಡದ ಸಂಭ್ರಮ

 
ಬಂಡೀಪುರದ ಕುರಿತು

ಬಂಡೀಪುರ ಇದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿದ್ದು ಮೈಸೂರಿನಿಂದ 80 ಕಿ.ಮೀ ದೂರದಲ್ಲಿದ್ದು, ಮೈಸೂರುಊಟಿ ರಸ್ತಯಲ್ಲಿದೆ, 1974ರಲ್ಲಿ ಹುಲಿ ಸಂರಕ್ಷತ ಆರಣ್ಯವಾಗಿ ಘೋಷಣೆಯಾಯಿತು. ಒಟ್ಟು 875 .ಕಿ.ಮಿ ವಿಸ್ತೀರ್ಣ ಹೊಂದಿರುವ ಕಾಡಿನಲ್ಲಿ 135ಕ್ಕೂ ಹೆಚ್ಚು ಸಂಖ್ಯೆ ಹುಲಿಗಳ ಆವಾಸ ಸ್ಥಾನವಾಗಿದ್ದು, ಇದು ಕರ್ನಾಟಕದ ನಾಗರಹೊಳೆ, ತಮಿಳುನಾಡಿನ ಮಧುಮಲೈ ರಕ್ಷಿತಾರಣ್ಯ ಹಾಗೂ ಕೇರಳದ ವೈನಾಡ್ ರಕ್ಷಿತಾರಣ್ಯಗಳನ್ನು ಒಳಗೊಂಡಿದೆ. ನಾಲ್ಕು ಕಾಡುಗಳ ಒಟ್ಟು ಪ್ರದೇಶ ನೀಲಗಿರಿ ಜೀವ ವೈವಿಧ್ಯ ಪ್ರದೇಶ ಎಂದು ಗುರುತಿಸಲಾಗಿದೆ








7 comments: