Tuesday 13 September 2016

ಬಂಡೀಪುರದಲ್ಲಿ ಹುಲಿ ಕಂಡಾಗ ಕುಪ್ಪಳಿಸಿದ ಮನ Read more at: http://kannada.oneindia.com/literature/articles/experience-about-tiger-sighting-in-bandipur-106880.html


ಬಂಡೀಪುರದಲ್ಲಿ 'ಪ್ರಿನ್ಸ್' ಹುಲಿ ಕಂಡಾಗ ಕುಪ್ಪಳಿಸಿದ ಮನ



Read more at: 

http://kannada.oneindia.com/literature/articles/experience-about-tiger-sighting-in-bandipur-106880.html?utm_source=article&utm_medium=fb-button&utm_campaign=article-fbshare

ಪಟ್ಟೆ ಹುಲಿ, ಬಲು ಕೆಟ್ಟ ಹುಲಿ ಕಾಡಲಿ ಒಂದಿತ್ತು.. ಬೆಟ್ಟದ ಹೂವು ಸಿನಿಮಾದ ಈ ಹಾಡು ನನ್ನ ಬದುಕಿನ ಗುರಿ, ಉದ್ದೇಶ, ಆಸಕ್ತಿಯನ್ನೇ ಬದಲಿಸಿತು. ಸಣ್ಣ ವಯಸ್ಸಿನಲ್ಲಿ ನೋಡಿ, ಕೇಳಿದ ಹಾಡು ನೆನಪಾಗಿ ಆಗಾಗ ನಾನು ಬೆಚ್ಚುತ್ತಿದ್ದೆ. ಅದಾದ ಮೇಲೆ ಆ ಹುಲಿ ಏನು ಮಾಡ್ತಿರಬಹುದು. ಪಾಪ, ಈಗ ಕಣ್ಣು ಬೇರೆ ಕಾಣ್ತಿರಲ್ಲ ಅನ್ನಿಸ್ತಿತ್ತು. ತೀರಾ ಇತ್ತೀಚೆಗೆ ಬಂಡೀಪುರದ ಕಾಡಲ್ಲಿ ಹುಲಿ ನೋಡುವ ತನಕ ಆ ಹಾಡಿನ ಗುಂಗು ಎಂಥೆಂಥ ಉಪಕಾರ ಮಾಡಿದೆ ಗೊತ್ತಾ? ಕಾಡಿನ ಪ್ರಾಣಿಗಳ ಬಗ್ಗೆ ಕುತೂಹಲ ಬೆಳೆಸಿತು, ಲಕ್ಷ ರುಪಾಯಿ ಕೊಟ್ಟು ಕ್ಯಾಮೆರಾ ತಗೊಂಡೆ, ಸುಧೀರ್ ಶಿವರಾಮಕೃಷ್ಣನ್, ಲೋಕೇಶ್ ಮೊಸಳೆ ಅಂಥವರ ಹತ್ತಿರ ಫೋಟೋಗ್ರಫಿ ಕ್ಲಾಸ್ ಗಳಿಗೆ ಹೋದೆ, ಕಾಡುಗಳನ್ನು ಸುತ್ತಾಡಿದೆ. ಈ ಎಲ್ಲಕ್ಕೂ ಅರ್ಥ ಸಿಕ್ಕ ಹಾಗೆ ಕುಣಿದು ಕುಪ್ಪಳಿಸುವಂತಾಗಿದ್ದು ಮಾತ್ರ ಬಂಡೀಪುರದ 'ಪ್ರಿನ್ಸ್' ಕಂಡಾಗ.[ಬಂಡೀಪುರದಲ್ಲಿ ಹುಲಿ ಹತ್ಯೆ: ಒಬ್ಬನ ಬಂಧನ] ತುಮಕೂರು ಜಿಲ್ಲೆ ಹೆಬ್ಬೂರಿನವರಾದ ಎಚ್.ಎಸ್. ವಿನಯ್ ಅವರು ಇತ್ತೀಚೆಗೆ ಬಂಡೀಪುರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಹುಲಿಯನ್ನು ಕಂಡ ಅವರು ತಮ್ಮ ಅನುಭವವನ್ನು ಕಣ್ಣಿಗೆ ಕಟ್ಟುವಂತೆ ಹಂಚಿಕೊಂಡಿದ್ದಾರೆ. "ಆ ಹುಲಿಯನ್ನು ನೋಡಿದ ಕ್ಷಣದಿಂದ ಮಾತಾಡ್ತಾ ಇದೀನಿ, ಇದೀನಿ.. ಖುಷಿಗೆ ಅದೆಷ್ಟು ಚೆಂದದ ಪದಗಳು ಸಿಗ್ತಿವೆಯೋ. ಅದೇ ಹುಕಿಯಲ್ಲಿ ಇದೂ ಒಂದು ಆಗಿಹೋಗಲಿ. ನನ್ನ ಅನುಭವವನ್ನ ನಿಮಗೂ ಹೇಳಿಬಿಡೋಣ ಅನ್ನಿಸಿದ್ದಕ್ಕೆ ನೀವಿದನ್ನು ನೋಡ್ತಿದೀರಿ, ಓದ್ತಿದೀರಿ. "ಈ ಪ್ರಯಾಣ ಶುರುವಾಗಿದ್ದು ಫೇಸ್ ಬುಕ್ ಮೂಲಕ. ಆ.27,28ನೇ ತಾರೀಕು 'ಜಂಗಲ್ ಡೈರಿ'ನವರು ಫೋಟೋಗ್ರಫಿ ಪ್ಯಾಕೇಜ್ ಟೂರ್ ಕಂಡಕ್ಟ್ ಮಾಡಿದ್ದರು. ಅದ್ಯಾಕೋ ಇಷ್ಟವಾಗಿ ಅದರ ಮುಖ್ಯಸ್ಥರು ಗಗನ್ ಜತೆ ಮಾತನಾಡಿ, ನಾನೊಂದು ಸೀಟ್ ಬುಕ್ ಮಾಡಿಸಿದೆ. ಜತೆಗೆ ಸ್ನೇಹಿತರೂ ಇರಲಿ ಅನ್ನೋ ಕಾರಣಕ್ಕೆ ಗೆಳೆಯರಾದ ಸುಬ್ರಹ್ಮಣ್ಯ, ಲೋಕೇಶ್ ಅವರನ್ನೂ ಒಪ್ಪಿಸಿದ್ದಾಯಿತು.[ಭಾರತ ಅತಿ ಪ್ರೀತಿಯ ಹುಲಿ 'ಮಚ್ಲಿ' ಇನ್ಮುಂದೆ ಘರ್ಜಿಸಲ್ಲ] "ಹೊರಡೋದಿಕ್ಕೆ ಇನ್ನೂ ಒಂದು ವಾರ ಇದೆ ಅನ್ನೋವಾಗಲೇ 'ಬಂಡೀಪುರ ಅಡ್ವೆಂಚರ್ಸ್' ಅನ್ನೋ ವಾಟ್ಸ್ ಅಪ್ ಗ್ರೂಪ್ ಮಾಡಿದ ಆ ಸಂಸ್ಥೆಯವರು ಪ್ರತಿ ದಿನವೂ ಸಫಾರಿಗಳಲ್ಲಿ ಕಾಣಿಸುತ್ತಿರುವ ಪ್ರಾಣಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ನಾವು ಉಳಿದುಕೊಳ್ಳೋದಿಕೆ ಬಂಡೀಪುರದ ಡಾರ್ಮಿಟರಿಯಲ್ಲೇ ವ್ಯವಸ್ಥೆ ಮಾಡಿದ್ದರು.' (ಲೇಖಕರ ಬಗ್ಗೆ: ತುಮಕೂರು ಜಿಲ್ಲೆ ಹೆಬ್ಬೂರಿನವರಾದ ಎಚ್.ಎಸ್.ವಿನಯ್ ಕಂಪ್ಯೂಟರ್ ಡಿಪ್ಲೊಮಾ ಮಾಡಿದ್ದಾರೆ. ಫೋಟೋಗ್ರಫಿ ಅವರ ಆಸಕ್ತಿ, ವನ್ಯಜೀವಿಗಳ ಬಗ್ಗೆ ಅವರಿಗೆ ಪ್ರೀತಿ. ಇತ್ತೀಚೆಗೆ ಬಂಡಿಪುರದಲ್ಲಿ ಹುಲಿ, ಕಾಟಿ ಮತ್ತಿತರ ಪ್ರಾಣಿ-ಪಕ್ಷಿಗಳನ್ನು ನೋಡಿ, ಆನಂದಿಸಿ, ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.) ಅಲ್ಲಿಂದ ಮುಂದೆ ನಾವು ಕಂಡಿದ್ದು...ಮಾತಿಲ್ಲ ಕತೆಯಿಲ್ಲ ಬರೀ ರೋಮಾಂಚನ...





Read more at: http://kannada.oneindia.com/literature/articles/experience-about-tiger-sighting-in-bandipur/slider-pf56288-106880.html

No comments:

Post a Comment