Thursday 26 September 2019

ಮುಂಚೂಣಿ ಯುದ್ಧ ವಿಮಾನಗಳ ಸರಣಿ ಅಪಘಾತ

ವಾಯುಪಡೆ ಸರಣಿ ಅಪಘಾತ
ಭಾರತ ಪ್ರತಿ ವರ್ಷ ರಕ್ಷಣಾ ಪಡೆಗಳಿಗಾಗಿ ಬಜೆಟ್ನಲ್ಲಿ ಸಿಂಹಪಾಲು ಮೀಸಲಿಡುತ್ತಿದೆ ಆದರೆ ವಾಯುಪಡೆ ವಿಮಾನಗಳ ಅಪಘಾತ ಸರಣಿ ಮುಂದುವರೆದಿದೆ.

2019ರಲ್ಲಿ ಭಾರತದ 12 ಯುದ್ಧ ವಿಮಾನಗಳು ಅವಘಡಕ್ಕೆ ಒಳಗಾಗಿದ್ದು 20ಕ್ಕೂ ಹೆಚ್ಚು ಸಿಬ್ಬಂದಿ ಹುತಾತ್ಮರಾಗಿದ್ದಾರೆ.ಅದರಲ್ಲು ಸುಕೂಯ್ -30, ಮಿರಾಜ್ 2000, ಮಿಗ್, ಜಗ್ವಾರ್ ನಂತಹ  ಮುಂಚೂಣಿ ಯುದ್ಧ ವಿಮಾನಗಳು ಅಪಘಾತಕ್ಕೆ ಒಳಗಾಗಿರುವುದು ರಕ್ಷಾಣ ಪಡೆಗಳ ಸಾಮರ್ಥ್ಯವನ್ನೇ ಪ್ರಶ್ನೆ ಮಾಡುವಂತಿದೆ.

ಜುಲೈನಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ರಕ್ಷಣಾ ಇಲಾಖೆ ಯುದ್ಧ ವಿಮಾನಗಳ ಪತನದ ಬಗ್ಗೆ ಮಾಹಿತಿ ನೀಡಿದ ರಕ್ಷಣಾ ಸಚಿವ 2016ರಿಂದೀಚಿಗೆ ಸೇನಾ ಪಡೆ ತನ್ನ 27 ಯುದ್ದ ವಿಮಾನಗಳನ್ನು ಕಳೆದುಕೊಂಡಿದೆ ಎಂದು ಮಾಹಿತಿ ನೀಡಿದ್ದರು.

ಅದರಲ್ಲಿ 2016-17ರಲ್ಲಿ  6 ಯುದ್ಧ ವಿಮಾನಗಳು, 2 ಹೆಲಿಕಾಪ್ಟರ್ಗಳು ಹಾಗೂ 1 ಯುದ್ಧ ಸಾರಿಗೆ ವಿಮಾನ ,1 ತರಬೇತಿ ವಿಮಾನ ಪತನವಾಗಿತ್ತು.
2017-18 ರಲ್ಲಿ 2 ಯುದ್ಧ ವಿಮಾನ , 1 ತರಬೇತಿ ವಿಮಾನ. 2018-19ರಲ್ಲಿ 7 ಯುದ್ಧ ವಿಮಾನ,2 ಹೆಲಿಕಾಪ್ಟರ್, 2 ತರಬೇತಿ ವಿಮಾನಗಳು ಪತನವಾಗಿತ್ತು.2019ರಿಂದ ಇದರ ಸಂಖ್ಯೆ ಇನ್ನೂ ಹೆಚ್ಚಾಗಿದೆ.

ಅದರಲ್ಲೂ ಮಿಗ್ ವಿಮಾನಗಳಂತೂ ಹಾರುವ ಶವ ಪೆಟ್ಟಿಗೆ ಎಂದೇ ಕುಖ್ಯಾತವಾಗಿವೆ.
ಈ ವರ್ಷ ಪತನವಾದ ವಿಮಾನಗಳ ಮಾಹಿತಿ

ಜನವರಿ 28:ಜಾಗ್ವಾರ್ ಮಿಮಾನ ಪತನ ಉತ್ತರ ಪ್ರದೇಶದಲ್ಲಿ
ವಾಯುಸೇನೆಯ ಜಾಗ್ವಾರ್ ಯುದ್ಧ ವಿಮಾನ ಜನವರಿ 28 ರಂದು ಉತ್ತರ ಪ್ರದೇಶದ ಖುಶಿನಗರ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು. ಯುದ್ಧ ವಿಮಾನವು ಗೋರಖ್‌ಪುರದ ಐಎಎಫ್ ವಾಯುನೆಲದಿಂದ ಹೊರಟಿತು. ಪೈಲಟ್ ಸುರಕ್ಷಿತವಾಗಿ ಹೊರಚಿಮ್ಮುವಲ್ಲಿ ಯಶಸ್ವಿಯಾದರು.

https://www.deccanherald.com/national/iafs-jaguar-aircraft-crashes-715321.html

ಫೆಬ್ರುವರಿ 1:ಮಿರಾಜ್‍ 2000 ಪತನ ಇಬ್ಬರೂ ಪೈಲೆಟ್ಗrಳ ಸಾವು
ಬೆಂಗಳೂರಿನಲ್ಲಿ ಮಿರಾಜ್ 2000 ತರಬೇತಿ ವಿಮಾನ ಅಪಘಾತದಲ್ಲಿ ಇಬ್ಬರು ಭಾರತೀಯ ವಾಯುಪಡೆಯ ಪೈಲಟ್‌ಗಳು ಸಾವನ್ನಪ್ಪಿದರು. ಅಪಘಾತದಲ್ಲಿ ಸ್ಕ್ವಾಡ್ರನ್ ಲೀಡರ್‍ ಸಮೀರ್ ಅಬ್ರೋಲ್ ಮತ್ತು ಸಿದ್ದಾರ್ಥ ನೇಗಿ ಮೃತಪಟ್ಟರು.

ವಿಮಾನ ಅಪಘಾತಕ್ಕೀಡಾಗುವ ಮುನ್ನ ಎರಡೂ ಪೈಲಟ್‌ಗಳು ಹೊರಹಾಕಲ್ಪಟ್ಟರು ಆದರೆ ಅವರಲ್ಲಿ ಒಬ್ಬರು ವಿಮಾನದ ಅವಶೇಷದ ಕೆಳಗೆ ಸಿಲುಕಿ ಸಾವನ್ನಪಿದರೆ ಗಾಯಗೊಂಡಿದ್ದ ಇನ್ನೊಬ್ಬ ಪೈಲೆಟ್‍ ಆಸ್ಪತ್ರಯಲ್ಲಿ ಸಾವನ್ನಪಿದರು.

https://www.prajavani.net/stories/national/mirage-2000-crash-613497.html

ಫೆಬ್ರವರಿ 12: ಪೋಖ್ರಾನ್ ಬಳಿ ಮಿಗ್ -27 ಅಪಘಾತಕ್ಕೀಡಾಯಿತು

ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಎಟಾ ಗ್ರಾಮದ ಸಮೀಪ ಐಎಎಫ್‌ನ ಮಿಗ್ -27 ಯುದ್ಧ ವಿಮಾನ ಅಪಘಾತಕ್ಕೀಡಾಯಿತು.
ಪೈಲಟ್ ಸುರಕ್ಷಿತವಾಗಿ ಹೊರಚಿಮ್ಮಿದರು.



ಫೆಬ್ರವರಿ 19: 2 ಸೂರ್ಯ ಕಿರಣ್ ವಿಮಾನಗಳ ನಡುವೆ ಡಿಕ್ಕಿ

ಬೆಂಗಳೂರಿನ ಯಲಹಂಕಾ ವಾಯುನೆಲೆಯಲ್ಲಿ ಅಭ್ಯಾಸದ ಸಮಯದಲ್ಲಿ ಐಎಎಫ್‌ನ ಎರಡು ಸೂರ್ಯ ಕಿರಣ್ ಜೆಟ್‌ಗಳು ಆಗಸದಲ್ಲಿ  ಡಿಕ್ಕಿ ಹೊಡೆದವು. ಸೂರ್ಯ ಕಿರಣ್ ಭಾರತೀಯ ವಾಯುಸೇನೆಯ ಏರೋಬ್ಯಾಟಿಕ್ ತಂಡವಾಗಿದ್ದು, ಇದು ಮಧ್ಯದ ಗಾಳಿಯ ಸಾಹಸಗಳನ್ನು ಪ್ರದರ್ಶಿಸುವಲ್ಲಿ ಹೆಸರುವಾಸಿಯಾಗಿದೆ. ಏರೋ ಇಂಡಿಯಾ 2019 ಪ್ರದರ್ಶನಕ್ಕಾಗಿ ಜೆಟ್‌ಗಳು ಅಭ್ಯಾಸ ನಡೆಸುತ್ತಿದ್ದವು.
ಇದರಲ್ಲಿ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಸಾವನ್ನಪಿದರೆ  ವಿಂಗ್ ಕಮಾಂಡರ್ ವಿ.ಟಿ.ಶೆಲ್ಕೆ ಮತ್ತು ಸ್ಕ್ವಾಡ್ರನ್ ನಾಯಕ ಟಿ.ಜೆ.ಸಿಂಗ್ ಗಾಯಗೊಂಡರು.

https://www.aninews.in/news/national/general-news/surya-kiran-crash-iaf-pilot-dead-2-undergoing-treatment20190219144526/#.XYxqbzD39po.whatsapp

ಫೆಬ್ರವರಿ 27: ಪಿಓಕೆಯಲ್ಲಿ ಮಿಗ್ -21 ಬೈಸನ್‍ ಅಪಘಾತ.ವಿಂಗ್‍ ಕಮಾಂಡರ್‍ ಅಭಿನಂದನ್‍ ಪಾಕ್ನುಲ್ಲಿ ಸೆರೆ.
ಬಾಲಕೋಟ್ ವೈಮಾನಿಕ ದಾಳಿಯ ನಂತರ ಭಾರತೀಯ ಮತ್ತು ಪಾಕಿಸ್ತಾನಿ ಫೈಟರ್ ಜೆಟ್‌ಗಳ ನಡುವೆ ನಡೆದ ಕಣ್ಣಳತೆಯ ಯುದ್ದ(ಡಾಗ್ ಫೈಟ್‍) ಕಾದಾಟ ಪಾಕ್ನ0 ಎಫ್‍-16 ಹಾಗೂ ಮಿಗ್‍ 21 ಬೈಸನ್‍ ಎರಡೂ ಮಿಮಾನಗಳು ಪತನವಾಗಿ ಭಾರತದ ಫೈಲೆಟ್‍ ಅಭಿನಂದನ್‍ ವರ್ಧಮಾನ್‍ರನ್ನು ಪಾಕ್‍ ಸೇನೆ ಬಂಧಿಸಿತ್ತು.

https://www.deccanherald.com/national/iaf-five-crashes-last-21-days-719350.html

ಫೆಬ್ರವರಿ 27: ಕಾಶ್ಮೀರದಲ್ಲಿ ಐಎಎಫ್ ಹೆಲಿಕಾಪ್ಟರ್ ಪತನ

ಬಾಲಕೋಟ್ ವೈಮಾನಿಕ ದಾಳಿಯ ಒಂದು ದಿನದ ನಂತರ, ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಅಪಘಾತಕ್ಕೀಡಾಯಿತು. ಹೆಲಿಕಾಪ್ಟರ್ ಮಿ -17 ವಿ -5 ಮಿಲಿಟರಿ ಸಾರಿಗೆ ಹೆಲಿಕಾಪ್ಟರ್ ಆಗಿತ್ತು.

ಅಪಘಾತದಲ್ಲಿ ಇಬ್ಬರು ಪೈಲಟ್ಗಳು ಸೇರಿದಂತೆ ಮೂವರು ಸಾವನ್ನಪ್ಪಿದರು. ಐಎಎಫ್ ಹೆಲಿಕಾಪ್ಟರ್ ಅವಂತಿಪೋರಾ ವಾಯುನೆಲದಿಂದ ಹೊರಟು ಅಪಘಾತಕ್ಕೀಡಾಯಿತು, ನಂತರ ತನಿಖೆಯಲ್ಲಿ ತಪ್ಪು ತಿಳುವಳಿಕೆಯಿಂದ ಭಾರತೀಯ ಸೇನೆಯೇ ಹೊಡೆದುರುಳಿಸಿರುವುದು ತಿಳಿಯಿತು.

ಮಾರ್ಚ್ 8: ಬಿಕಾನೆರ್ ಬಳಿ ಮಿಗ್ -21 ಅಪಘಾತ
ರಾಜಸ್ಥಾನದ ಬಿಕಾನೆರ್ ಬಳಿಯಲ್ಲಿ ಭಾರತೀಯ ವಾಯುಪಡೆಯ ಮಿಗ್ -21 ಯುದ್ಧ ವಿಮಾನ ಅಪಘಾತಕ್ಕೀಡಾಯಿತು. ಪೈಲಟ್ ಸುರಕ್ಷಿತವಾಗಿ ಹೊರಚಿಮ್ಮುವಲ್ಲಿ ಯಶಸ್ವಿಯಾದರು.

ಮಿಗ್ -21 ವಿಮಾನವು ವಾಡಿಕೆಯಂತೆ ಸರ್ವೇಕ್ಷಣೆಯಲ್ಲಿ ತೊಡಗಿತ್ತು.ವಿಮಾನ ತನ್ನ ನೆಲೆಯಿಂದ ಹೊರಟ ನಂತರ ಎಂಜಿನ್‍ ತೊಂದರೆಯಿಂದ ಅಪಘಾತಕ್ಕಿಡಾಗಿತ್ತು.

ಮಾರ್ಚ್ 27:ಜೋಧ್ಪುುರ್‍ ಬಳಿ ಮಿಗ್‍ 27 ನವೀಕರಿಸಿದ ವಿಮಾನ ಪತನ
ಎಂಜಿನ್‍ ತೊಂದರೆಯಿಂದ ಮಿಗ್‍ 27 ವಿಮಾನ ಜೋಧ್ಪು2ರದಿಂದ 120 ಕಿಲೋ ಮೀಟರ್‍ ದೂರದಲ್ಲಿ ವಿಮಾನ ಪತನವಾಯಿತು.ಈ ವಿಮಾನ ವಾಡಿಕೆ ಸರ್ವೇಕ್ಷಣೆಯಲ್ಲಿ ತೊಡಗಿತ್ತು.ಫೈಲೆಟ್‍ ಯಶಸ್ವಿಯಾಗಿ ಹೊರಚಿಮ್ಮಉವಲ್ಲಿ ಯಶಸ್ವಿಯಾದರು.

ಜೂನ್‍ 20:ಅರುಣಾಚಲಪ್ರದೇದಲ್ಲಿ ಎಎನ್‍ 32 ವಿಮಾನ ಪತನ
ಸೇನೆಯ ಸಾರಿಗೆ ವಿಮಾನ ಅಸ್ಸಾಂನ ಜೋರ್ಹಾಟ್‌ನಿಂದ ಅರುಣಾಚಲ ಪ್ರದೇಶದ ಚೀನಾ ಗಡಿಯ ಬಳಿಯ ಮೆಂಚುಕಾ ಸುಧಾರಿತ ಲ್ಯಾಂಡಿಂಗ್ ಮೈದಾನಕ್ಕೆ ಜೂನ್ 3 ರಂದು ಹೊರಟಿದ್ದು, ಟೇಕಾಫ್ ಆದ ಅರ್ಧ ಘಂಟೆಯ ಹೊತ್ತಿಗೆ ಸಂಪರ್ಕ ಕಳೆದುಕೊಂಡಿತು.
ಈ ವಿಮಾನದಲ್ಲಿದ್ದ ವಾಯುಪಡೆಯ 13 ಸಿಬ್ಬಂದಿ ಮೃತಹೊಂದಿದ್ದರು.

https://www.prajavani.net/stories/national/iaf-32-aircraft-goes-missi-641560.html

ಜೂನ್ 27: ಜಗ್ವಾರ್‍ ವಿಮಾನ ತುರ್ತು ಲ್ಯಾಂಡಿಂಗ್‍
ಅಂಬಾಲ ವಾಯುನೆಲೆಯಿಂದ ಹೊರಟಿದ್ದ ಜಗ್ವಾರ್‍ ಯದ್ದವಿಮಾನಕ್ಕೆ ಪಕ್ಷಿ ಡಿಕ್ಕಿಹೊಡೆದ ಪರಿಣಾಮ ತುರ್ತು ಲ್ಯಾಂಡಿಂಗ್‍ ಮಾಡಲಾಯಿತು.

ಜುಲೈ 2: ತೇಜಸ್‌ ವಿಮಾನದಿಂದ ಬಿದ್ದ ಇಂಧನ ಟ್ಯಾಂಕ್
ದೇಶಿ ನಿರ್ಮಿತ ತೇಜಸ್‍ ಯುದ್ಧ ವಿಮಾನ ಚನೈನ ತಾಂಬರಮ್‍ ನೆಲೆಯಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಹಾರಾಡುವಾಗಲೇ ಅದರ ಇಂಧನ ಟ್ಯಾಂಕ್‍ ಬಿದ್ದು ದೇಶ ತಂತ್ರಜ್ಞಾನದ ಬಗ್ಗೆಯೇ ಪ್ರಶ್ನೆ ಮೂಡಿಸಿತ್ತು.

ಆಗಸ್ಟ್ 8:ಸುಕೋಯ್‍-30 ಪತನ
ಅಸ್ಸಾಂನ ಮಿಲನ್ಪುರ ಪ್ರದೇಶದಲ್ಲಿ ಭತ್ತದ ಗದ್ದೆಯಲ್ಲಿ ಅಪಘಾತಕ್ಕೀಡಾದಕ್ಕಿತ್ತು ,ಇದರಲ್ಲಿದ್ದ ಇಬ್ಬರೂ ಫೈಲೆಟ್ಗೆಳು ಯಶಸ್ವಿಯಾಗಿ ಹೊರಚಿಮ್ಮಿದ್ದರು.

ಸೆಪ್ಟಂಬರ್‍ 25:ಮಿಗ್‍ 21 ಪತನ
ಗ್ವಾಲಿಯರ್‍ ವಾಯುನೆಲೆಯಿಂದ ಹೊರಟಿದ್ದ ಮಿಗ್‍ ತರಬೇತಿ ವಿಮಾನ ಪತನವಾಗಿತ್ತು.ಇದರಲ್ಲಿದ್ದ ಇಬ್ಬರೂ ಪೈಲೆಟ್ಗ್ಳು ಹೊರಚಿಮ್ಮುವಲ್ಲಿ ಯಶಸ್ವಿಯಾಗಿದ್ದರು.