Hebbur
Vinay.H.S
Sunday, 14 June 2020
ಭಾರತ ನೇಪಾಳ ಗಡಿತಂಟೆ
Thursday, 26 September 2019
ಮುಂಚೂಣಿ ಯುದ್ಧ ವಿಮಾನಗಳ ಸರಣಿ ಅಪಘಾತ
ವಾಯುಪಡೆ ಸರಣಿ ಅಪಘಾತ
ಭಾರತ ಪ್ರತಿ ವರ್ಷ ರಕ್ಷಣಾ ಪಡೆಗಳಿಗಾಗಿ ಬಜೆಟ್ನಲ್ಲಿ ಸಿಂಹಪಾಲು ಮೀಸಲಿಡುತ್ತಿದೆ ಆದರೆ ವಾಯುಪಡೆ ವಿಮಾನಗಳ ಅಪಘಾತ ಸರಣಿ ಮುಂದುವರೆದಿದೆ.
2019ರಲ್ಲಿ ಭಾರತದ 12 ಯುದ್ಧ ವಿಮಾನಗಳು ಅವಘಡಕ್ಕೆ ಒಳಗಾಗಿದ್ದು 20ಕ್ಕೂ ಹೆಚ್ಚು ಸಿಬ್ಬಂದಿ ಹುತಾತ್ಮರಾಗಿದ್ದಾರೆ.ಅದರಲ್ಲು ಸುಕೂಯ್ -30, ಮಿರಾಜ್ 2000, ಮಿಗ್, ಜಗ್ವಾರ್ ನಂತಹ ಮುಂಚೂಣಿ ಯುದ್ಧ ವಿಮಾನಗಳು ಅಪಘಾತಕ್ಕೆ ಒಳಗಾಗಿರುವುದು ರಕ್ಷಾಣ ಪಡೆಗಳ ಸಾಮರ್ಥ್ಯವನ್ನೇ ಪ್ರಶ್ನೆ ಮಾಡುವಂತಿದೆ.
ಜುಲೈನಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ರಕ್ಷಣಾ ಇಲಾಖೆ ಯುದ್ಧ ವಿಮಾನಗಳ ಪತನದ ಬಗ್ಗೆ ಮಾಹಿತಿ ನೀಡಿದ ರಕ್ಷಣಾ ಸಚಿವ 2016ರಿಂದೀಚಿಗೆ ಸೇನಾ ಪಡೆ ತನ್ನ 27 ಯುದ್ದ ವಿಮಾನಗಳನ್ನು ಕಳೆದುಕೊಂಡಿದೆ ಎಂದು ಮಾಹಿತಿ ನೀಡಿದ್ದರು.
ಅದರಲ್ಲಿ 2016-17ರಲ್ಲಿ 6 ಯುದ್ಧ ವಿಮಾನಗಳು, 2 ಹೆಲಿಕಾಪ್ಟರ್ಗಳು ಹಾಗೂ 1 ಯುದ್ಧ ಸಾರಿಗೆ ವಿಮಾನ ,1 ತರಬೇತಿ ವಿಮಾನ ಪತನವಾಗಿತ್ತು.
2017-18 ರಲ್ಲಿ 2 ಯುದ್ಧ ವಿಮಾನ , 1 ತರಬೇತಿ ವಿಮಾನ. 2018-19ರಲ್ಲಿ 7 ಯುದ್ಧ ವಿಮಾನ,2 ಹೆಲಿಕಾಪ್ಟರ್, 2 ತರಬೇತಿ ವಿಮಾನಗಳು ಪತನವಾಗಿತ್ತು.2019ರಿಂದ ಇದರ ಸಂಖ್ಯೆ ಇನ್ನೂ ಹೆಚ್ಚಾಗಿದೆ.
ಅದರಲ್ಲೂ ಮಿಗ್ ವಿಮಾನಗಳಂತೂ ಹಾರುವ ಶವ ಪೆಟ್ಟಿಗೆ ಎಂದೇ ಕುಖ್ಯಾತವಾಗಿವೆ.
ಈ ವರ್ಷ ಪತನವಾದ ವಿಮಾನಗಳ ಮಾಹಿತಿ
ಜನವರಿ 28:ಜಾಗ್ವಾರ್ ಮಿಮಾನ ಪತನ ಉತ್ತರ ಪ್ರದೇಶದಲ್ಲಿ
ವಾಯುಸೇನೆಯ ಜಾಗ್ವಾರ್ ಯುದ್ಧ ವಿಮಾನ ಜನವರಿ 28 ರಂದು ಉತ್ತರ ಪ್ರದೇಶದ ಖುಶಿನಗರ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು. ಯುದ್ಧ ವಿಮಾನವು ಗೋರಖ್ಪುರದ ಐಎಎಫ್ ವಾಯುನೆಲದಿಂದ ಹೊರಟಿತು. ಪೈಲಟ್ ಸುರಕ್ಷಿತವಾಗಿ ಹೊರಚಿಮ್ಮುವಲ್ಲಿ ಯಶಸ್ವಿಯಾದರು.
https://www.deccanherald.com/national/iafs-jaguar-aircraft-crashes-715321.html
ಫೆಬ್ರುವರಿ 1:ಮಿರಾಜ್ 2000 ಪತನ ಇಬ್ಬರೂ ಪೈಲೆಟ್ಗrಳ ಸಾವು
ಬೆಂಗಳೂರಿನಲ್ಲಿ ಮಿರಾಜ್ 2000 ತರಬೇತಿ ವಿಮಾನ ಅಪಘಾತದಲ್ಲಿ ಇಬ್ಬರು ಭಾರತೀಯ ವಾಯುಪಡೆಯ ಪೈಲಟ್ಗಳು ಸಾವನ್ನಪ್ಪಿದರು. ಅಪಘಾತದಲ್ಲಿ ಸ್ಕ್ವಾಡ್ರನ್ ಲೀಡರ್ ಸಮೀರ್ ಅಬ್ರೋಲ್ ಮತ್ತು ಸಿದ್ದಾರ್ಥ ನೇಗಿ ಮೃತಪಟ್ಟರು.
ವಿಮಾನ ಅಪಘಾತಕ್ಕೀಡಾಗುವ ಮುನ್ನ ಎರಡೂ ಪೈಲಟ್ಗಳು ಹೊರಹಾಕಲ್ಪಟ್ಟರು ಆದರೆ ಅವರಲ್ಲಿ ಒಬ್ಬರು ವಿಮಾನದ ಅವಶೇಷದ ಕೆಳಗೆ ಸಿಲುಕಿ ಸಾವನ್ನಪಿದರೆ ಗಾಯಗೊಂಡಿದ್ದ ಇನ್ನೊಬ್ಬ ಪೈಲೆಟ್ ಆಸ್ಪತ್ರಯಲ್ಲಿ ಸಾವನ್ನಪಿದರು.
https://www.prajavani.net/stories/national/mirage-2000-crash-613497.html
ಫೆಬ್ರವರಿ 12: ಪೋಖ್ರಾನ್ ಬಳಿ ಮಿಗ್ -27 ಅಪಘಾತಕ್ಕೀಡಾಯಿತು
ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಎಟಾ ಗ್ರಾಮದ ಸಮೀಪ ಐಎಎಫ್ನ ಮಿಗ್ -27 ಯುದ್ಧ ವಿಮಾನ ಅಪಘಾತಕ್ಕೀಡಾಯಿತು.
ಪೈಲಟ್ ಸುರಕ್ಷಿತವಾಗಿ ಹೊರಚಿಮ್ಮಿದರು.
ಫೆಬ್ರವರಿ 19: 2 ಸೂರ್ಯ ಕಿರಣ್ ವಿಮಾನಗಳ ನಡುವೆ ಡಿಕ್ಕಿ
ಬೆಂಗಳೂರಿನ ಯಲಹಂಕಾ ವಾಯುನೆಲೆಯಲ್ಲಿ ಅಭ್ಯಾಸದ ಸಮಯದಲ್ಲಿ ಐಎಎಫ್ನ ಎರಡು ಸೂರ್ಯ ಕಿರಣ್ ಜೆಟ್ಗಳು ಆಗಸದಲ್ಲಿ ಡಿಕ್ಕಿ ಹೊಡೆದವು. ಸೂರ್ಯ ಕಿರಣ್ ಭಾರತೀಯ ವಾಯುಸೇನೆಯ ಏರೋಬ್ಯಾಟಿಕ್ ತಂಡವಾಗಿದ್ದು, ಇದು ಮಧ್ಯದ ಗಾಳಿಯ ಸಾಹಸಗಳನ್ನು ಪ್ರದರ್ಶಿಸುವಲ್ಲಿ ಹೆಸರುವಾಸಿಯಾಗಿದೆ. ಏರೋ ಇಂಡಿಯಾ 2019 ಪ್ರದರ್ಶನಕ್ಕಾಗಿ ಜೆಟ್ಗಳು ಅಭ್ಯಾಸ ನಡೆಸುತ್ತಿದ್ದವು.
ಇದರಲ್ಲಿ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಸಾವನ್ನಪಿದರೆ ವಿಂಗ್ ಕಮಾಂಡರ್ ವಿ.ಟಿ.ಶೆಲ್ಕೆ ಮತ್ತು ಸ್ಕ್ವಾಡ್ರನ್ ನಾಯಕ ಟಿ.ಜೆ.ಸಿಂಗ್ ಗಾಯಗೊಂಡರು.
ಫೆಬ್ರವರಿ 27: ಪಿಓಕೆಯಲ್ಲಿ ಮಿಗ್ -21 ಬೈಸನ್ ಅಪಘಾತ.ವಿಂಗ್ ಕಮಾಂಡರ್ ಅಭಿನಂದನ್ ಪಾಕ್ನುಲ್ಲಿ ಸೆರೆ.
ಬಾಲಕೋಟ್ ವೈಮಾನಿಕ ದಾಳಿಯ ನಂತರ ಭಾರತೀಯ ಮತ್ತು ಪಾಕಿಸ್ತಾನಿ ಫೈಟರ್ ಜೆಟ್ಗಳ ನಡುವೆ ನಡೆದ ಕಣ್ಣಳತೆಯ ಯುದ್ದ(ಡಾಗ್ ಫೈಟ್) ಕಾದಾಟ ಪಾಕ್ನ0 ಎಫ್-16 ಹಾಗೂ ಮಿಗ್ 21 ಬೈಸನ್ ಎರಡೂ ಮಿಮಾನಗಳು ಪತನವಾಗಿ ಭಾರತದ ಫೈಲೆಟ್ ಅಭಿನಂದನ್ ವರ್ಧಮಾನ್ರನ್ನು ಪಾಕ್ ಸೇನೆ ಬಂಧಿಸಿತ್ತು.
https://www.deccanherald.com/national/iaf-five-crashes-last-21-days-719350.html
ಫೆಬ್ರವರಿ 27: ಕಾಶ್ಮೀರದಲ್ಲಿ ಐಎಎಫ್ ಹೆಲಿಕಾಪ್ಟರ್ ಪತನ
ಬಾಲಕೋಟ್ ವೈಮಾನಿಕ ದಾಳಿಯ ಒಂದು ದಿನದ ನಂತರ, ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಅಪಘಾತಕ್ಕೀಡಾಯಿತು. ಹೆಲಿಕಾಪ್ಟರ್ ಮಿ -17 ವಿ -5 ಮಿಲಿಟರಿ ಸಾರಿಗೆ ಹೆಲಿಕಾಪ್ಟರ್ ಆಗಿತ್ತು.
ಅಪಘಾತದಲ್ಲಿ ಇಬ್ಬರು ಪೈಲಟ್ಗಳು ಸೇರಿದಂತೆ ಮೂವರು ಸಾವನ್ನಪ್ಪಿದರು. ಐಎಎಫ್ ಹೆಲಿಕಾಪ್ಟರ್ ಅವಂತಿಪೋರಾ ವಾಯುನೆಲದಿಂದ ಹೊರಟು ಅಪಘಾತಕ್ಕೀಡಾಯಿತು, ನಂತರ ತನಿಖೆಯಲ್ಲಿ ತಪ್ಪು ತಿಳುವಳಿಕೆಯಿಂದ ಭಾರತೀಯ ಸೇನೆಯೇ ಹೊಡೆದುರುಳಿಸಿರುವುದು ತಿಳಿಯಿತು.
ಮಾರ್ಚ್ 8: ಬಿಕಾನೆರ್ ಬಳಿ ಮಿಗ್ -21 ಅಪಘಾತ
ರಾಜಸ್ಥಾನದ ಬಿಕಾನೆರ್ ಬಳಿಯಲ್ಲಿ ಭಾರತೀಯ ವಾಯುಪಡೆಯ ಮಿಗ್ -21 ಯುದ್ಧ ವಿಮಾನ ಅಪಘಾತಕ್ಕೀಡಾಯಿತು. ಪೈಲಟ್ ಸುರಕ್ಷಿತವಾಗಿ ಹೊರಚಿಮ್ಮುವಲ್ಲಿ ಯಶಸ್ವಿಯಾದರು.
ಮಿಗ್ -21 ವಿಮಾನವು ವಾಡಿಕೆಯಂತೆ ಸರ್ವೇಕ್ಷಣೆಯಲ್ಲಿ ತೊಡಗಿತ್ತು.ವಿಮಾನ ತನ್ನ ನೆಲೆಯಿಂದ ಹೊರಟ ನಂತರ ಎಂಜಿನ್ ತೊಂದರೆಯಿಂದ ಅಪಘಾತಕ್ಕಿಡಾಗಿತ್ತು.
ಮಾರ್ಚ್ 27:ಜೋಧ್ಪುುರ್ ಬಳಿ ಮಿಗ್ 27 ನವೀಕರಿಸಿದ ವಿಮಾನ ಪತನ
ಎಂಜಿನ್ ತೊಂದರೆಯಿಂದ ಮಿಗ್ 27 ವಿಮಾನ ಜೋಧ್ಪು2ರದಿಂದ 120 ಕಿಲೋ ಮೀಟರ್ ದೂರದಲ್ಲಿ ವಿಮಾನ ಪತನವಾಯಿತು.ಈ ವಿಮಾನ ವಾಡಿಕೆ ಸರ್ವೇಕ್ಷಣೆಯಲ್ಲಿ ತೊಡಗಿತ್ತು.ಫೈಲೆಟ್ ಯಶಸ್ವಿಯಾಗಿ ಹೊರಚಿಮ್ಮಉವಲ್ಲಿ ಯಶಸ್ವಿಯಾದರು.
ಜೂನ್ 20:ಅರುಣಾಚಲಪ್ರದೇದಲ್ಲಿ ಎಎನ್ 32 ವಿಮಾನ ಪತನ
ಸೇನೆಯ ಸಾರಿಗೆ ವಿಮಾನ ಅಸ್ಸಾಂನ ಜೋರ್ಹಾಟ್ನಿಂದ ಅರುಣಾಚಲ ಪ್ರದೇಶದ ಚೀನಾ ಗಡಿಯ ಬಳಿಯ ಮೆಂಚುಕಾ ಸುಧಾರಿತ ಲ್ಯಾಂಡಿಂಗ್ ಮೈದಾನಕ್ಕೆ ಜೂನ್ 3 ರಂದು ಹೊರಟಿದ್ದು, ಟೇಕಾಫ್ ಆದ ಅರ್ಧ ಘಂಟೆಯ ಹೊತ್ತಿಗೆ ಸಂಪರ್ಕ ಕಳೆದುಕೊಂಡಿತು.
ಈ ವಿಮಾನದಲ್ಲಿದ್ದ ವಾಯುಪಡೆಯ 13 ಸಿಬ್ಬಂದಿ ಮೃತಹೊಂದಿದ್ದರು.
https://www.prajavani.net/stories/national/iaf-32-aircraft-goes-missi-641560.html
ಜೂನ್ 27: ಜಗ್ವಾರ್ ವಿಮಾನ ತುರ್ತು ಲ್ಯಾಂಡಿಂಗ್
ಅಂಬಾಲ ವಾಯುನೆಲೆಯಿಂದ ಹೊರಟಿದ್ದ ಜಗ್ವಾರ್ ಯದ್ದವಿಮಾನಕ್ಕೆ ಪಕ್ಷಿ ಡಿಕ್ಕಿಹೊಡೆದ ಪರಿಣಾಮ ತುರ್ತು ಲ್ಯಾಂಡಿಂಗ್ ಮಾಡಲಾಯಿತು.
ಜುಲೈ 2: ತೇಜಸ್ ವಿಮಾನದಿಂದ ಬಿದ್ದ ಇಂಧನ ಟ್ಯಾಂಕ್
ದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನ ಚನೈನ ತಾಂಬರಮ್ ನೆಲೆಯಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಹಾರಾಡುವಾಗಲೇ ಅದರ ಇಂಧನ ಟ್ಯಾಂಕ್ ಬಿದ್ದು ದೇಶ ತಂತ್ರಜ್ಞಾನದ ಬಗ್ಗೆಯೇ ಪ್ರಶ್ನೆ ಮೂಡಿಸಿತ್ತು.
ಆಗಸ್ಟ್ 8:ಸುಕೋಯ್-30 ಪತನ
ಅಸ್ಸಾಂನ ಮಿಲನ್ಪುರ ಪ್ರದೇಶದಲ್ಲಿ ಭತ್ತದ ಗದ್ದೆಯಲ್ಲಿ ಅಪಘಾತಕ್ಕೀಡಾದಕ್ಕಿತ್ತು ,ಇದರಲ್ಲಿದ್ದ ಇಬ್ಬರೂ ಫೈಲೆಟ್ಗೆಳು ಯಶಸ್ವಿಯಾಗಿ ಹೊರಚಿಮ್ಮಿದ್ದರು.
ಸೆಪ್ಟಂಬರ್ 25:ಮಿಗ್ 21 ಪತನ
ಗ್ವಾಲಿಯರ್ ವಾಯುನೆಲೆಯಿಂದ ಹೊರಟಿದ್ದ ಮಿಗ್ ತರಬೇತಿ ವಿಮಾನ ಪತನವಾಗಿತ್ತು.ಇದರಲ್ಲಿದ್ದ ಇಬ್ಬರೂ ಪೈಲೆಟ್ಗ್ಳು ಹೊರಚಿಮ್ಮುವಲ್ಲಿ ಯಶಸ್ವಿಯಾಗಿದ್ದರು.
Saturday, 15 October 2016
ದೇವರಾಯನದುರ್ಗದಲ್ಲಿ ಅಪರೂಪದ ಶಿವ ದೇಗುಲ
Read more at: http://kannada.oneindia.com/travel/vidyashankara-unique-temple-of-devarayanadurga/slider-pf57414-108206.html
Wednesday, 28 September 2016
ನವರಾತ್ರಿಗೆ ಸಿದ್ಧಗೊಂಡಿದೆ ಹೆಬ್ಬೂರು ಶ್ರೀಚಕ್ರ ಕಾಮಾಕ್ಷಿ ದೇಗುಲ
ಕಾಮಾಕ್ಷಿ ಶಾರದಾಂಬೆ |
ಚಿದಂಬರ
ಶ್ರೀಚಕ್ರ
|
ಈ ಶ್ರೀಚಕ್ರದಲ್ಲಿ ಬಿಂದು, ತ್ರಿಕೋಣ, ಪಂಚಕೋಣ, ಅಷ್ಟಕೋಣ, ದ್ವಾದಶಕೋಣ, ಅಷ್ಟಾದಶ ಕೋಣ, ಪಂಚವಿಂಶತಿ ಕೋಣ ಹಾಗೂ ಪಂಚತ್ರಿಂಶತ್ ಕೋಣಗಳಿವೆ. ಅಲ್ಲದೆ ಇದಕ್ಕೆ ಕೂರ್ಮ ಪೀಠವಿದ್ದು, ಅದರ ಮೇಲೆ ಅಷ್ಟ ದಿಗ್ಗಜಗಳು, ಅಷ್ಟ ದಿಗ್ನಾಗಗಳು, ಅಷ್ಟ ಶಕ್ತಿಗಳು ಇವೆ. ಕಮಲ ದಳ, ಸ್ವರ್ಣ ಕಳಶ ಭೂಪುರ ಮತ್ತು ಏಳು ಆವರಣಗಳಲ್ಲಿ 35, 25, 22, 18, 12, 8, 5ರಂತೆ ಕಮಲದ ದಳಗಳು ಮತ್ತು ಸ್ವರ್ಣಕಳಶ ರೂಪದ ಬಿಂದುವಿನ ರೀತಿಯ ರಚನೆ ಇವೆ. ಈ ದೇಗುಲವೂ ಶ್ರೀಚಕ್ರ ಮಾದರಿಯಲ್ಲೇ ಇದೆ. ಕಾಮಾಕ್ಷಿ ವಿಗ್ರಹ ಇರುವ ಪೀಠವೂ ಶ್ರೀಚಕ್ರ ಮಾದರಿಯಲ್ಲೇ ನಿರ್ಮಿಸಲಾಗಿದೆ ಮತ್ತು ಪಚ್ಚೆಯ ಮತ್ತೊಂದು ಶ್ರೀಚಕ್ರಕ್ಕೆ ದಿನವೂ ಪೂಜೆ ನಡೆಯುತ್ತದೆ. ವಿವಿಧ ಹೋಮ, ವಿಶೇಷ ಪೂಜೆ ಮಹಾಲಯ ಅಮಾವಾಸ್ಯೆ ಅಮ್ಮನವರಿಗೆ ನವಕಾಭಿಷೇಕ, ದುರ್ಗಾಹೋಮದಿಂದ ಪ್ರಾರಂಭವಾಗಿ ಒಂಬತ್ತು ದಿನವೂ ವಿವಿಧ ಹೋಮ, ವಿಶೇಷ ಪೂಜೆಗಳು ನಡೆಯುತ್ತವೆ. ಲಲಿತಾ ಪಂಚಮಿಯಂದು ಲಲಿತಾಹೋಮ, ದುರ್ಗಾಷ್ಟಮಿಯಂದು ದುರ್ಗಾ ಹೋಮಗಳು ನಡೆಯುತ್ತವೆ. ಅಷ್ಟಮಿ ಹಾಗೂ ಪಂಚಮಿ ಹೊರತುಪಡಿಸಿ ಎಲ್ಲ ದಿನವೂ ಚಂಡಿಕಾ ಹೋಮ ನಡೆಯುತ್ತದೆ. ರಸ್ತೆಯೂ ಚೆನ್ನಾಗಿದೆ ಇನ್ನು ಹೆಬ್ಬೂರಿಗೆ ತುಮಕೂರಿನ ಕಡೆಯಿಂದ ಬಂದರೆ ಇಪ್ಪತ್ಮೂರು ಕಿ.ಮೀ ಆಗುತ್ತದೆ. ಇನು ಕುಣಿಗಲ್ ಕಡೆಯಿಂದ ಬರುವುದಾದರೆ ಹದಿನೈದು ಕಿ.ಮೀ. ಎರಡೂ ಕಡೆಯಿಂದ ರಸ್ತೆ ತುಂಬ ಚೆನ್ನಾಗಿದೆ. ಭಕ್ತರಿಗೆ ಪ್ರಸಾದ ಮಠವು ಈ ವರೆಗೆ 11 ಪೀಠಾಧಿಪತಿಗಳನ್ನು ಕಂಡಿದೆ. ಹಿಂದಿನ ಪೀಠಾಧಿಪತಿಗಳಾದ ನಾರಾಯಣಾಶ್ರಮ ಸ್ವಾಮಿಗಳ ಕಾಲದಲ್ಲಿ ಅಭಿವೃದ್ಧಿ ಹೊಂದಿದ್ದು, ಸದ್ಯಕ್ಕೆ ಮಠವನ್ನು ಮಾಧವಾಶ್ರಮ ಸ್ವಾಮಿಗಳು ಮುನ್ನಡೆಸುತ್ತಿದ್ದಾರೆ. ಮಹಾಲಯ ಅಮಾವಾಸ್ಯೆಯಿಂದ ಆರಂಭವಾಗಿ ನವರಾತ್ರಿ ಪೂರ್ಣವಾಗುವವರೆಗೆ ಮಠಕ್ಕೆ ಬರುವ ಭಕ್ತರಿಗೆ ಊಟದ ವ್ಯವಸ್ಥೆ ಇರುತ್ತದೆ. ಒಂಬತ್ತು ದಿನದ ವಿಶೇಷ ನವರಾತ್ರಿಯ ಒಂಬತ್ತು ದಿನದಲ್ಲಿ ದೇವಿಯು ದುರ್ಗಾ, ಆರ್ಯಾ, ಭಗವತೀ, ಕುಮಾರಿ, ಅಂಬಿಕಾ, ಮಹಿಷ ಮರ್ದಿನಿ, ಚಂಡಿಕಾ, ಸರಸ್ವತಿ ಹಾಗೂ ವಾಗೀಶ್ವರಿಯ ರೂಪದಲ್ಲಿ ಇರುತ್ತಾಳೆ ಎಂಬುದು ನಂಬಿಕೆ.
ಚಿದಂಬರ
ಶ್ರೀಚಕ್ರ
|
ಕಾಮಾಕ್ಷಿ
ಶಾರದಾಂಬೆ
|
ದೇಗುಲದ
ಹೊರಾಗಣ
|
ಶ್ರೀಮಠದಲ್ಲಿರುವ
ಗಣಪತಿ
|
ಸತ್ಯನಾರಾಯಣ
|
ದೇವ
ವೈದ್ಯ ಧನ್ವಂತರಿ ವಿಗ್ರಹ
|
ಬ್ರಹ್ಮೀಭೂತ
ನಾರಾಯಣಾಶ್ರಮ ಸ್ವಾಮಿಗಳ ಅಧೀಷ್ಠಾನ
|
ಮಾಧವಾಶ್ರಮ
ಸ್ವಾಮಿಗಳು
|
ಸಪತ್ನೀ
ಸಮೇತ ನವಗ್ರಹಗಳು
|
ಮೇರು
ಆಕಾರದ ಗರ್ಭಗುಡಿಯ ಗೋಪುರ
|
Tuesday, 27 September 2016
ಬಂಡೀಪುರದಲ್ಲಿ `ಪ್ರಿನ್ಸ್’ ಎಂಬ ವಿಸ್ಮಯ
ಹಸಿರು ಬಾಲದ ಜೇನು ಹಿಡುಕ |
ಒಂದು ಕಿಲೋ.ಮೀಟರ್ಗಳಷ್ಟು ದೂರ ನನಗೆ ಕ್ಯಾಮೆರಾ ಅಭ್ಯಾಸ ನಡೆಸಲು ಸಹಕರಿಸಿದ. ನಡೆದ ಅಷ್ಟೂ ದೂರ ಅಲಲ್ಲಿ ಲಂಟಾನದ ಪೊದೆಗಳ ನಡುವೆ ಮಾಯವಾಗಿ ಮತ್ತೆ ನಮ್ಮ ವಾಹನದ ಬಳಿ ಕಾಣಿಸಿಕೊಳ್ಳುವ ಔದಾರ್ಯ ತೋರಿ ನಂತರ ಲಂಟಾನದ ಪೊದೆಗಳಲ್ಲಿ ಮರೆಯಾದ.
ಹುಲಿ ಕಂಡ ನಮ್ಮ ತಂಡದ ಸಂಭ್ರಮ
|