Saturday 15 October 2016

ದೇವರಾಯನದುರ್ಗದಲ್ಲಿ ಅಪರೂಪದ ಶಿವ ದೇಗುಲ

http://kannada.oneindia.com/travel/vidyashankara-unique-temple-of-devarayanadurga-108206.html



ಚಿಕ್ಕವಯಸ್ಸಿನಲ್ಲಿ ಓದಿದ, ಕೇಳಿದ ಕಥೆಗಳಲ್ಲಿನ ವಾತಾವರಣದಂತೆಯೇ ಇರುವ ಈ ಶಿವನ ದೇಗುಲ ಪರಿಸರದ ಮೌನ ಬಹಳ ಚಂದ. ಸುತ್ತಲೂ ದಟ್ಟವಾದ ಕಾಡಿದೆ. ಇನ್ನು ಅಲ್ಲಿನ ಪುಟ್ಟ ಗುಡ್ಡದ ಮೇಲೆ ನಿಂತಿರುವ ಈ ವಿದ್ಯಾಶಂಕರನ ಬಗ್ಗೆ ಬಹಳ ಮಂದಿಗೆ ಗೊತ್ತಿಲ್ಲ. ವಿದ್ಯಾಶಂಕರ ಅಥವಾ ಸುತ್ತಲಿನವರ ಪಾಲಿನ ಓದೋ ಶಂಕರ ಇರುವುದು ದೇವರಾಯನ ದುರ್ಗದಿಂದ ಗೊರವನ ಲಕ್ಷ್ಮಿ ದೇವಸ್ಥಾನಕ್ಕೆ ಹೋಗುವ ದಾರಿ ಮಧ್ಯೆ. ತುಮಕೂರು ಜಿಲ್ಲೆಯ ದೇವರಾಯನ ದುರ್ಗ, ನಾಮಚಿಲುಮೆ ಪರಿಚಿತವಾದ ಪ್ರವಾಸಿ ತಾಣ. ಅಲ್ಲಿವರೆಗೆ ಹೋಗುವ ಪ್ರವಾಸಿಗರು ಅಲ್ಲಿಂದ ಎರಡ್ಮೂರು ಕಿಲೋಮೀಟರ್ ದೂರದಲ್ಲಿರುವ ವಿದ್ಯಾಶಂಕರ ದೇಗುಲದ ದರ್ಶನದಿಂದ ತಪ್ಪಿಸಿಕೊಳ್ಳುತ್ತಾರೆ.
ಆ ಬಗ್ಗೆ ಮಾಹಿತಿ ಇಲ್ಲದೆ ಹೀಗಾಗುತ್ತದೆಸುಮಾರು ಎಂಟು ನೂರು ವರ್ಷದ ಹಳೆಯ ದೇಗುಲ ಹಾಗೂ ಶಿವಲಿಂಗಕ್ಕೆ ಮತ್ತೆ ಇಂದಿನ ರೂಪ ನೀಡಿರುವುದು ಟಿವಿಎಸ್ ಕಂಪನಿಯವರು. ದೇವಾಲಯದ ಆವರಣ, ಅಲ್ಲಿನ ಪ್ರಶಾಂತ ವಾತಾವರಣ, ಸ್ವಚ್ಛವಾದ ಪರಿಸರ ನೋಡಿದ ಮೇಲಂತೂ ಆ ಕಂಪನಿಯವರ ಶ್ರದ್ಧೆ, ಭಕ್ತಿ, ಆಸಕ್ತಿ ಹೆಚ್ಚು ಸ್ಪಷ್ಟವಾಗುತ್ತದೆ. ದೇವರಾಯನ ದುರ್ಗದ ನಾಮಚಿಲುಮೆಯ ಬಳಿ ಕೊರಟಗೆರೆ ಕಡೆಗೆ ಹೋಗುವ ಮಾರ್ಗದಲ್ಲಿ ಎಡಕ್ಕೆ ಹೊರಳಿದರೆ ಎರಡ್ಮೂರು ಕಿಲೋಮೀಟರ್ ಫಾಸಲೆಯಲ್ಲಿ, ಎಡಭಾಗಕ್ಕೆ ಈ ದೇವಸ್ಥಾನವಿದೆ. ದೊಡ್ಡ ಗೇಟೊಂದು ಕಾಣಿಸುತ್ತದೆ. ಅದರ ಒಳಕ್ಕೆ ಹೋದರೆ ಕೆಲವು ನೂರು ಅಡಿಗಳ ದೂರದಲ್ಲಿ ಮೆಟ್ಟಿಲುಗಳು ಇದ್ದು, ಅದನ್ನು ಹತ್ತಿದರೆ ವಿದ್ಯಾಶಂಕರನ ಗುಡಿ ಇದೆ. ದಿನದ ಪ್ರವಾಸಕ್ಕೆ ಸೂಕ್ತ ದೇವರಾಯನ ದುರ್ಗ ಬೆಂಗಳೂರಿನಿಂದ ಒಂದು ದಿನದ ಮಟ್ಟಿಗೆ ಪ್ರವಾಸ ಹೊರಡಬೇಕು ಎಂದುಕೊಳ್ಳುವವರ ಪಾಲಿಗೆ ಹೇಳಿ ಮಾಡಿಸಿದಂಥ ಸ್ಥಳ. ನಾಮಚಿಲುಮೆ,ನರಸಿಂಹ ದೇವಸ್ಥಾನಗಳ ಜತೆಗೆ ವಿದ್ಯಾಶಂಕರನ ದರ್ಶನ ಪಡೆಯಬಹುದು. ದೇವರಾಯನ ದುರ್ಗ ಜೀವ ವೈವಿಧ್ಯಗಳ ವಿಶಿಷ್ಟ ತಾಣ.
ಜಿಂಕೆ
, ಚಿರತೆ, ಕರಡಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಉಂಟು ದುರ್ಗದ ಹಳ್ಳಿಯ ದೈವ ಬೆಂಗಳೂರಿನಿಂದ ಬರುವ ಮಾರ್ಗದಲ್ಲಿ ನಾಮಚಿಲುಮೆಯಿಂದ ಬಲಕ್ಕೆ ಹೋದರೆ ದೇವರಾಯನ ದುರ್ಗದ ನರಸಿಂಹ ದೇವಾಲಯಕ್ಕೆ ಹೋದರೆ, ಎಡಕ್ಕೆ ದುರ್ಗದಹಳ್ಳಿ ಬಳಿ ಇರುವುದೇ ವಿದ್ಯಾಶಂಕರ. ಕಾರ್ತೀಕ ಮಾಸ, ಧನುರ್ಮಾಸ ಹಾಗೂ ಆರಿದ್ರಾ ನಕ್ಷತ್ರ ಇರುವಾಗ ವಿಶೇಷ ಪೂಜೆ ಮಾಡಲಾಗುತ್ತದೆ 800 ವರ್ಷ ಹಳೆಯದು ಚೋಳರ ಕಾಲದಲ್ಲಿ ನಿರ್ಮಿಸಲಾದ ಈ ವಿದ್ಯಾಶಂಕರ ದೇವಾಲಯಕ್ಕೆ ಎಂಟು ನೂರು ವರ್ಷಗಳ ಇತಿಹಾಸವಿದೆ. ನಿತ್ಯ ಬೆಳಗ್ಗೆ ಎಂಟರಿಂದ ಸಂಜೆ ಆರರವರೆಗೆ ಮಾತ್ರ ದೇವಾಲಯ ತೆರೆದಿರುತ್ತದೆ. ಸುತ್ತ ಮುತ್ತ ಯಾವುದೇ ಅಂಗಡಿ ಇಲ್ಲದ ಕಾರಣ ಹಣ್ಣು-ಕಾಯಿ ಇತರ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದು ಕ್ಷೇಮ. ಪಾಠಶಾಲೆಯಾಗಿತ್ತು ದುರ್ಗದ ಹಳ್ಳಿ ಹಾಗೂ ಸುತ್ತಮುತ್ತಲ ಹಳ್ಳಿಯ ಮಕ್ಕಳಿಗೆ ಈ ದೇವಾಲಯ ಪಾಠಶಾಲೆಯಾಗಿತ್ತಂತೆ. ಆ ಕಾರಣಕ್ಕೆ ಜನರು ವಿದ್ಯಾಶಂಕರ ಅಥವಾ ಓದೋ ಶಂಕರ ಎನ್ನುತ್ತಾರೆ. ಏಕೈಕ ಶೈವ ದೇಗುಲ ಇತಿಹಾಸ ಅಥವಾ ಪುರಾಣದ ಪ್ರಸ್ತಾವದ ಹಿನ್ನೆಲೆಯಲ್ಲಿ ಗಮನಿಸಿದರೆ ನರಸಿಂಹ ಮತ್ತಿತರ ವೈಷ್ಣವ ದೇವಾಲಯದ ಮಧ್ಯೆ ಇರುವ ಹಳೆಯ ದೇವಾಲಯ ವಿದ್ಯಾಶಂಕರನದು. ಟಿವಿಎಸ್ ಕಂಪನಿ ಅಭಿವೃದ್ಧಿ ದೇವರಾಯನದುರ್ಗವನ್ನು ದತ್ತು ಪಡೆದ ಟಿವಿಎಸ್ ಕಂಪನಿಯವರು ಅಷ್ಟಮಂಗಲ ಪ್ರಶ್ನೆ ಕೇಳಿಸಿದ್ದಾರೆ. ಅಗ ಇಲ್ಲಿನ
ಶಿಥಿಲಾವಸ್ಥೆ ಶಿವ ದೇಗುಲದ ಮಾಹಿತಿ ದೊರೆತು
, ಅದರ ಜೀರ್ಣೋದ್ಧಾರಕ್ಕೆ ಸೂಚನೆ ಸಿಕ್ಕಿದೆ. ಒಂದೊಂದು ಕಲ್ಲು ಪಳೆಯುಳಿಕೆಯಂತೆ ಉಳಿದಿದ್ದ ದೇವಾಲಯ ನಿರ್ಮಾಣದ ಕಲ್ಲುಗಳನ್ನು ಒಂದೊಂದಕ್ಕೂ ಸಂಖ್ಯೆ ನೀಡಿ, ಮೂಲಸ್ವರೂಪವನ್ನು ಉಳಿಸಿ, ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ ಟಿವಿಎಸ್ ಕಂಪೆನಿಯವರು. ಹಲವು ದೇಗುಲ 2004ರಲ್ಲಿ ವಿದ್ಯಾಶಂಕರ ದೇಗುಲದ ಪುನರ್ ಪ್ರತಿಷ್ಠಾಪನೆ ಮಾಡಲಾಯಿತು. ಇಲ್ಲಿಂದ ಪೂರ್ವಕ್ಕೆ ಘಾಟಿ ಸುಬ್ರಹ್ಮಣ್ಯ, ಯೋಗ ನಂದೀಶ್ವರ ದೇಗಲವಿದೆ. ಈ ಮೂರೂ ದೇವಾಲಯವನ್ನು ಒಂದೇ ದಿನ ದರ್ಶಿಸಿದರೆ ಹೆಚ್ಚು ಪುಣ್ಯ ಎಂಬುದು ಸ್ಥಳೀಯರ ನಂಬಿಕೆ. ಎಚ್ಚರಿಕೆ ವಹಿಸಿ ವಿದ್ಯಾಶಂಕರ ದೇಗುಲದ ಆವರಣ ಹಾಗೂ ಸುತ್ತಮುತ್ತಲ ಪ್ರದೇಶ ತುಂಬ ಸೂಕ್ಷ್ಮವಾದದ್ದು. ಇಲ್ಲಿನ ಜೀವ ವೈವಿಧ್ಯ, ಪರಿಸರದ ಬಗ್ಗೆ ಪ್ರೀತಿ, ಕಾಳಜಿ ಇಟ್ಟುಕೊಂಡು ಇಲ್ಲಿಗೆ ಹೋದರೆ ಒಳ್ಳೆಯದು. ಇನ್ನೂ ಪ್ರವಾಸಿಗರ ಪಾಲಿಗೆ ಪುರ್ಣವಾಗಿ ಸಿಕ್ಕದ ಈ ಪ್ರದೇಶದಲ್ಲಿ ಪ್ಲಾಸ್ಟಿಕ್, ತ್ಯಾಜ್ಯ ಅಥವಾ ಪರಿಸರಕ್ಕೆ ಹಾನಿಯಾಗುವ ಯಾವ ವಸ್ತು ಹಾಕದಿರುವಂತೆ ಎಚ್ಚರ ವಹಿಸಿ.

Read more at: http://kannada.oneindia.com/travel/vidyashankara-unique-temple-of-devarayanadurga/slider-pf57414-108206.html
















 

No comments:

Post a Comment